ಶೋಭಾ ಕಪೂರ್ (ಜನನ ೧ ಫೆಬ್ರವರಿ ೧೯೪೯) ಒಬ್ಬ ಭಾರತೀಯ ದೂರದರ್ಶನ, ಚಲನಚಿತ್ರ ಮತ್ತು ವೆಬ್ ಸರಣಿ ನಿರ್ಮಾಪಕರು. ಅವರು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು ಅವರು ಮತ್ತು ಅವರ ಮಗಳು ಏಕ್ತಾ ಕಪೂರ್ ಅವರು ನಡೆಸುತ್ತಿರುವ ಭಾರತದ ಮುಂಬೈನಲ್ಲಿರುವ ಚಲನಚಿತ್ರ, ಟಿವಿ ಮತ್ತು ವೆಬ್ ಸರಣಿ ನಿರ್ಮಾಣ ಸಂಸ್ಥೆಯಾಗಿದೆ. ಬಾಲಾಜಿ ಟೆಲಿಫಿಲ್ಮ್ಸ್‌ನ ಒಟ್ಟಾರೆ ಆಡಳಿತ ಮತ್ತು ನಿರ್ಮಾಣ ಚಟುವಟಿಕೆಗಳನ್ನು ಕಪೂರ್ ನೋಡಿಕೊಳ್ಳುತ್ತಾರೆ. == ವೈಯಕ್ತಿಕ ಜೀವನ == ಮದುವೆಗೆ ಮೊದಲು ಅವರು ಗಗನಸಖಿಯಾಗಿದ್ದರು . ನಂತರ ಅವರು ನಟ ಕಪೂರ್ ಜೀತೇಂದ್ರ ಅವರನ್ನು ಮದುವೆಯಾಗಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಮಗಳಾದ ಏಕ್ತಾ ಕಪೂರ್ (ಜ. ೧೯೭೫), ಒಬ್ಬ ನಿರ್ಮಾಪಕಿ ಮತ್ತು ಮಗ ತುಷಾರ್ ಕಪೂರ್ (ಜನನ. ೧೯೭೬), ಒಬ್ಬ ನಟ. == ಚಿತ್ರಕಥೆ (ನಿರ್ಮಾಪಕರಾಗಿ) == === ಚಲನಚಿತ್ರಗಳು === ಕಪೂರ್ ತಮ್ಮ ಬ್ಯಾನರ್ ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿದ ಚಲನಚಿತ್ರಗಳ ದೀರ್ಘ ಪಟ್ಟಿಯು ಈ ಕೆಳಗಿನಂತಿದೆ. === ವೆಬ್ ಸರಣಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಕಪೂರ್